top of page
Kannada Rajyotsava  Web.jpg

ಕನ್ನಡ ರಾಜ್ಯೋತ್ಸವವು ಪ್ರತಿಯೊಬ್ಬ ಕನ್ನಡಿಗನೂ ಅತೀವ ಕಾತುರದಿಂದ ಎದುರು ನೋಡುವ ಹಬ್ಬವಾಗಿದೆ. ನಮ್ಮ ಅನೇಕ ಪ್ರಸಿದ್ಧ ಹಬ್ಬಗಳ ಜೊತೆಗೆ, ದೀಪಾವಳಿ ಹಬ್ಬವೂ ವಿಶೇಷ ಮನ್ನಣೆ ಪಡೆದಿದೆ. ಬೆಳಕಿನ ಹಬ್ಬವೆಂದು ಕರೆಯಲ್ಪಡುವ ದೀಪಾವಳಿ, ಕತ್ತಲಿಗೆ ಹೋರಾಟ ನೀಡಿದ ಬೆಳಕಿನ ಮತ್ತು ದುರಾತ್ಮತೆಗೆ ವಿರುದ್ಧ ಸತ್ಪ್ರವೃತ್ತಿಯ ಗೆಲುವಿನ ಸಂಕೇತವಾಗಿದೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ, ನಮ್ಮ ಸಮೃದ್ಧ ಪರಂಪರೆ, ಸಂಸ್ಕೃತಿ, ಮತ್ತು ಕನ್ನಡಿಗರಾಗಿರುವ ಹೆಮ್ಮೆಯನ್ನು ಆಚರಿಸೋಣ. ನಾವು ಒಗ್ಗಟ್ಟಿನ ಆತ್ಮಸ್ಫೂರ್ತಿಯನ್ನು ಶ್ರದ್ಧೆಯಿಂದ ಮೆರೆದಂತೆ, ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಪಾಡಲು ನಾವು ಶ್ರಮಿಸೋಣ.

ಪ್ರತಿವರ್ಷ,ಆಸ್ಟಿನ್ ಕನ್ನಡ ಸಂಘವು ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಈ ಕಾರ್ಯಕ್ರಮವು ಆಸ್ಟಿನ್ ಕನ್ನಡಿಗರ ಕಲೆಯನ್ನು ಪ್ರದರ್ಶಿಸಲು ಮತ್ತು ಕರ್ನಾಟಕದ ಸಮೃದ್ಧ ಪರಂಪರೆ ಹಾಗೂ ಕನ್ನಡ ಭಾಷೆಯ ಮೇಲಿನ ಪ್ರೀತಿ, ಬೆಂಬಲವನ್ನು ವ್ಯಕ್ತಪಡಿಸಲು ಅದ್ಭುತ ವೇದಿಕೆಯಾಗುತ್ತದೆ. ಹಬ್ಬದ ಈ ಸಂದರ್ಭದಲ್ಲಿ, ಆಸ್ಟಿನ್ ಕನ್ನಡ ಸಂಘವು ಸಾಂಪ್ರದಾಯಿಕ ಊಟದ ಜೊತೆಗೆ ಸಾಮಾಜಿಕತೆ ಮತ್ತು ಸಂತಸದಿಂದ ತುಂಬಿದ ವಾತಾವರಣವನ್ನು ಸೃಷ್ಟಿಸುತ್ತದೆ.

 

Kannada Rajyotsava is a festival that every Kannadiga eagerly anticipates. Alongside our many renowned festivals, Deepavali also holds a special place in our hearts. Known as the Festival of Lights, it symbolizes the triumph of light over darkness and good over evil.On this occasion of Kannada Rajyotsava, let us celebrate our rich heritage, culture, and the spirit of unity that brings us together as proud Kannadigas. Let us strive, contribute, and work together to preserve the rich heritage and culture of Karnataka.

Every year, the Austin Kannada Sangha enthusiastically celebrates Kannada Rajyotsava and Deepavali. This event serves as a wonderful platform for the Kannada community in Austin to showcase their talents and express their support and love for the rich heritage of Karnataka and the Kannada language. On this festive occasion, the Austin Kannada Sangha creates a joyful atmosphere, bringing people together to socialize and enjoy a traditional feast, making it a memorable celebration for Kannadigas in Austin.

bottom of page