ಕನ್ನಡ ಕಲಿ ಶಿಕ್ಷಣ ಕಾರ್ಯಕ್ರಮ ಆಸ್ಟಿನ್ ಕನ್ನಡ ಸಂಗದ ವತಿಯಿಂದ ನಡೆಯುತ್ತಿರುವ ಲಾಭರಹಿತ ಶಿಕ್ಷಣ ಸಂಸ್ಥೆಯಾಗಿದೆ. ೨೦೧೮ ನೇ ವರ್ಷದಲ್ಲಿ ಕನ್ನಡ ಕಲಿ ಆರಂಭವಾಯಿತು. ಕಳೆದ ೨ ವರ್ಷಗಳಲ್ಲಿ COVID ನ ಎಲ್ಲಾ ಕಷ್ಟಗಳನ್ನ ಎದುರಿಸಿ ಈ ಕಾರ್ಯಕ್ರಮ ಯಶಸ್ವಿಯಾಗಿ ಬೆಳೆದು ಬಂದಿದೆ. ವಿದ್ಯಾರ್ಥಿಗಳ ಸಂಖ್ಯೆ ಈಗ ೯೦ ಮುಟ್ಟಿದೆ. ಕನ್ನಡ ಕಲಿ ಕಾರ್ಯಕ್ರಮದ ದ್ಯೇಯೋದ್ದೇಶವೆಂದರೆ - ಮಕ್ಕಳಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಹಾಗು ಸರಳ ರೀತಿಯಲ್ಲಿ ಅರ್ಥ ಮಾಡಿಕೊಡುವುದು. ಈ ಕೈಂಕರ್ಯಕ್ಕೆ ಪಣ ತೊಟ್ಟು, ಟೊಂಕ ಕಟ್ಟಿ ನಿಂತಿರುವ ನಮ್ಮ ಸ್ವಯಂಸೇವಕ ಶಿಕ್ಷಕರೇ ಇದರ ಮೂಲಾಧಾರವೆಂದರೆ ತಪ್ಪಾಗಲಾರದು.
ಕನ್ನಡ ಕಲಿ ಕಾರ್ಯಕ್ರಮವು ಕ್ಯಾಲಿಫೋರ್ನಿಯಾದ KKNC ಕನ್ನಡ ಕಲಿ ರೂಪಿಸಿದ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುತ್ತಿದೆ. ಇದರೊಂದಿಗೆ ಕನ್ನಡ ಕಲಿ ಕರ್ನಾಟಕದ ಪುಸ್ತಕಗಳನ್ನು ಬಳಸುತ್ತಿದೆ. ನಾವು ಬಳಸುತ್ತಿರುವ ಪಠ್ಯಕ್ರಮ ಪುಸ್ತಕಗಳನ್ನು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ-ಕನ್ನಡ ಕಲಿ-ಕೆಕೆಎನ್‌ಸಿಯ ಪಠ್ಯ ಪುಸ್ತಕಗಳಿಗೆ ಕರ್ನಾಟಕ ಸರ್ಕಾರ ಮಾನ್ಯತೆ ನೀಡಿದೆ. ಕರ್ನಾಟಕ ಸರ್ಕಾರದ ಅನುಮೋದನೆ ಪತ್ರವನ್ನು ಕೆಳಗೆ ನೀಡಲಾಗಿದೆ..
ಪಠ್ಯಕ್ರಮದಲ್ಲಿ ೬ ಹಂತಗಳಿವೆ, ಪ್ರತಿ ಹಂತವು ಕನ್ನಡ ಭಾಷೆಯಲ್ಲಿ ಕೆಲವು ಪ್ರಾವೀಣ್ಯತೆಯನ್ನು ಕೇಂದ್ರೀಕರಿಸುತ್ತದೆ ಮತ್ತು ವಿದ್ಯಾರ್ಥಿಗಳ ಪ್ರಗತಿಗಳಿಗನುಗುಣವಾಗಿ ಅವರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಎಲ್ಲಾ ವಿದ್ಯಾರ್ಥಿಗಳು ಮೊದಲನೇ ಹಂತದಿಂದ ಪ್ರಾರಂಭಿಸುತ್ತಾರೆ. ತರಗತಿಗಳು ಸೆಪ್ಟೆಂಬರ್‌ನಿಂದ ಮೇ ವರೆಗೆ, ಶನಿವಾರ ಬೆಳಿಗ್ಗೆ 9:30 ರಿಂದ 10:30 ರವರೆಗೆ ಮತ್ತು ಭಾನುವಾರದಂದು ಸಂಜೆ 4 ರಿಂದ 5 ರವರೆಗೆ ಆಸ್ಟಿನ್‌ನ ಚಿನ್ಮಯ ಮಿಷನ್ ಸೆಂಟರ್‌ನಲ್ಲಿ ನಡೆಯುತ್ತವೆ.
Kannada Kali is an educational program run under the auspices of the Austin Kannada Sangha. Kannada Kali started in the year 2018. Notwithstanding the impact of Covid, it has grown leaps and bounds. As of today we have 90 students as part of this program. Kannada Kali is run by passionate volunteers whose main objective is to encourage all children to read, write, converse and understand Kannada language and script.
Kannada Kali program is adopting syllabus formulated by KKNC Kannada Kali of California. Along with this Kannada Kali is using the books from Karnataka. The curriculum books we are using has been approved by Karnataka Abhivrudhi Pradhikaara-Government of Karnataka Accreditation for Kannada Kali-KKNC's Text Books. Below is the letter of approval from the Karnataka Government.
There are 6 levels in the syllabus, starting from the basic level 1, each level focuses on a certain level of proficiency in Kannada language. Students progress to the next level based on the criteria set for each level. Classes are held from September to May, on Saturdays 9:30 AM-10:30 AM and Sundays from 4 PM - 5 PM in Chinmaya Mission Center, Austin.