ಸಂಗೀತೋತ್ಸವ ೨೦೧೯ - Sangeethotsava 2019

Days

Hours

Minutes

Seconds

ಆಸ್ಟಿನ್ ಕನ್ನಡ ಸಂಘದ ಸಮಿತಿಯು ವರ್ಷದ ಮೊಟ್ಟಮೊದಲ ಕಾರ್ಯಕ್ರಮ - ಸಂಗೀತೋತ್ಸವವನ್ನು ಪ್ರಸ್ತುತಪಡಿಸಲು ಹರ್ಷಿಸುತ್ತದೆ. ಕಾರ್ಯಕ್ರಮವು ಸೀಡರ್ ಪಾರ್ಕಿನಲ್ಲಿರುವ Live Oak Unitarian Universalist Church ಸಭಾಂಗಣದಲ್ಲಿ ಫೆಬ್ರವರಿ ೯ ರಂದು ಮಧ್ಯಾಹ್ನ ೨:೦೦ ಘಂಟೆಗೆ ಆರಂಭವಾಗುತ್ತದೆ. ಸ್ಥಳೀಯ ಕಲಾವಿದರಿಗೆ ಮತ್ತು ಅರಳುತ್ತಿರುವ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ-ಸಂಸ್ಕೃತದ ಶಾಸ್ತ್ರೀಯ, ಲಘು ಶಾಸ್ತ್ರೀಯ ರಚನೆಗಳಿಗೆ ಆದ್ಯತೆ. ಜೊತೆಯಲ್ಲಿಯೇ ಕನ್ನಡಕ್ಕಾಗಿ ದುಡಿದ ಕವಿ-ಸಂತ-ಕೀರ್ತನಕಾರರನ್ನು ಸ್ಮರಿಸಿ, ಗೌರವಿಸುವ, ತನ್ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಒಂದು ಪ್ರಯತ್ನ. ಇದು ನಿಮಗೆಲ್ಲಾ ಒಂದು ಸುಂದರ ಸಂಗೀತದ ಅನುಭವವನ್ನು ಕೊಡುವುದೆಂದು ನಮ್ಮ ಆಶಯ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ! ಸರಳ, ಸ್ನೇಹಿ ಮತ್ತು ಸಹೃದಯಿ ಕನ್ನಡಿಗ ಬಳಗದ ಬೆಂಬಲ ನಮಗೆ ನಿರಂತರವಾಗಿ ದೊರೆಯುತ್ತಿರಲು ನಿಮ್ಮೆಲ್ಲರನ್ನು ಸ್ವಾಗತಿಸಿ ಮನರಂಜಿಸಲು ಸಂಘದ ಸಮಿತಿ ಹರ್ಷಿಸುತ್ತದೆ.

Happy 2019! AKS is happy to announce the first event for the New Year – Sangeethotsava which will be held on Saturday, February 9th from 2:00 p.m. onwards at Live Oak Unitarian Universalist Church, Cedar Park. Sangeethotsava will be a special musical afternoon that provides a platform for local artists and young talent to perform classical / semi-classical compositions of Kannada literature. It also provides us with a chance to honor the great poets and saints for their contribution to our rich language and to keep our culture alive. Entry to the event is free! We are fortunate to have an incredible community of supporters at AKS who help to strengthen and share the beauty of our music and look forward to seeing you all at this community engagement music festival soon.

ಆಸ್ಟಿನ್ ಕನ್ನಡಿಗರು - Austin Kannadigas

Subscribe to our YouTube channel